LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಚಿಕ್ಕನಾಯಕನಹಳ್ಳಿಯಲ್ಲಿ ಭರದಿಂದ ಸಾಗಿದೆ ಅತಿಕ್ರಮಣಗೊಂಡ ಫುಟ್‌ಪಾತ್‌ ತೆರವು

ಚಿಕ್ಕನಾಯಕನಹಳ್ಳಿ: ಶನಿವಾರ ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿನ ಪಾದಚಾರಿ ಮಾರ್ಗದ ಅಕ್ರಮ ಅತಿಕ್ರಮಣಗಳನ್ನು ತೆರವು ಕಾರ್ಯಾಚರಣೆ ನಡೆಯಿತು.

 ಪಟ್ಟಣದಲ್ಲಿ ಹಾದುಹೋಗುವ ಹೆದ್ದಾರಿಯ ಪಾದಚಾರಿ ಮಾರ್ಗದಲ್ಲಿನ ಅತಿಕ್ರಮಣಗಳ ತೆರವುಗೊಳಿಸಲು ಪುರಸಭಾ ಅಧಿಕಾರಿವರ್ಗ, ಸಿಬ್ಬಂದಿ, ಪೌರಾರ್ಮಿಕರು, ಟ್ರ್ಯಾಕ್ಟರ್‌ಗಳು ಹಾಗೂ  ಜೆಸಿಬಿಯಂತ್ರದೊಂದಿಗೆ ಪಾದಚಾರಿ ಮಾರ್ಗದ ಅತಿಕ್ರಮಣದ ತೆರವು ಕಾರ್ಯಾಚರಣೆಗೆ ಇಳಿದವು.

ಪಟ್ಟಣದೊಳಗೆ ಹಾದುಹೋಗುವ ಮುಖ್ಯರಸ್ತೆಯ ಕೆನರಾಬ್ಯಾಂಕ್, ಖಾಸಗಿ ಬಸ್ ನಿಲ್ದಾಣ, ನೆಹರೂವೃತ್ತದ ಕರ್ನಾಟಕ ಬ್ಯಾಂಕ್, ಸರ್ಕಾರಿ ಬಸ್ ನಿಲ್ದಾಣದ ಸನಿಹ ಕೆಲವು ಭಾಗದ ಜನಸಂಚಾರ ಜಾಗಗಳು ವ್ಯಾಪಾರಿಗಳಿಂದ ಅತಿಕ್ರಮಣಗೊಂಡ Pಪರಿಣಾಮ ಪಾದಚಾರಿಗಳು ರಸ್ತೆಯಲ್ಲಿಯೇ ಜೀವವನ್ನು ಕೈಹಿಡಿದುಕೊಂಡು ಓಡಾಡುವ ಸ್ಥಿತಿಯಿತ್ತು. ಈ ಅತಿಕ್ರಮಣದಿಂದಾಗಿ ದ್ವಿಚಕ್ರವಾಹನಗಳನ್ನು ಸಹ ಬೇಕಾಬಿಟ್ಟಿಯಂತೆ ರಸ್ತೆಯಲ್ಲಿಯೇ ನಿಲ್ಲಿಸುವ ಪರಿಣಾಮ ಹಲವು ಅಪಘಾತಗಳು ಸಂಭವಿಸಿತ್ತು.

ಇದರ ಜೊತೆಗೆ ರಸ್ತೆಬದಿಯಲ್ಲಿನ ಗೂಡಂಗಡಿಗಳಾದ ವಿವಿಧ ಮಾದರಿಯ ಉಪಹಾರದಅಂಗಡಿ, ಹಣ್ಣಿನ ಅಂಗಡಿ, ಫಾಸ್ಟ್‌ಫುಡ್, ತರಕಾರಿ ಇನ್ನಿತರ ಸಂಚಾರಿ ಅಂಗಡಿಗಳು  ದಿನೇದಿನೇ ರಸ್ತೆಯ ಬದಿಯಲ್ಲಿ ಹೆಚ್ಚುತ್ತಲೇ ಇರುವುದು ಭಯಮುಕ್ತ ಜನಸಂಚಾರಕ್ಕೆ ಕಾರಣವಾಗಿತ್ತು. ಹಲವು ದಿನಗಳಿಂದ ಈ ತೆರವು ಕಾರ್ಯಾಚರಣೆಯ ವದಂತಿ ಹರಡಿದ್ದರೂ ಕಾರ್ಯಾಚರಣೆ ನಡೆದಿರಲಿಲ್ಲ, ಇದರ ಅಂಗವಾಗಿ ಸಾರ್ವಜನಿಕ ತಿಳುವಳಿಕೆ ನೀಡಲಾಗಿತ್ತು. ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಮುಖ್ಯರಸ್ತೆಯ ಬದಿಯ ಪಾದಚಾರಿ ಮಾರ್ಗದ ಇಕ್ಕೆಲಗಳ ವ್ಯಾಪಾರಸ್ತರು ತಮ್ಮ ಅನುಕೂಲಕ್ಕಾಗಿ ಚರಂಡಿ ಮೇಲೆ ನಿರ್ಮಿಸಿದ ಸಿಮೆಂಟ್ ಮೆಟ್ಟಿಲುಗಳನ್ನು ಜೆಸಿಬಿ ಮೂಲಕ ಕಿತ್ತುಹಾಕಲಾಯಿತು. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಗಳ ಸಹಕಾರ ಪಡೆಯಲಾಗಿತ್ತು.

ಹೆದ್ದಾರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ಯಾವುದೇ ಅತಿಕ್ರಮಣಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದೆಂದು ಮುಖ್ಯಾಧಿಕಾರಿ ಶ್ರೀಮತಿ ಮಂಜಮ್ಮ ತಿಳಿಸಿದರು. ಪಟ್ಟಣದಲ್ಲಿ ಹಾದುಹೋಗುವ ಮುಖ್ಯರಸ್ತೆಯ ಇಕ್ಕೆಲಗಳ ಅತಿಕ್ರಮಣದಿಂದ ಸಾರ್ವಜನಿಕರ ಓಡಾಟಕ್ಕೆ ಹೆಚ್ಚು ತೊಂದರೆಯಾಗುತ್ತಿರುವ ಜಾಗಗಳಲ್ಲಿ ತೆರವುಕಾರ್ಯಾಚರಣೆ ಸಂಪೂರ್ಣವಾಗಿ ಮಾಡಲಾಗುವುದು, ರಸ್ತೆಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವ  ಸಂಚಾರಿ ಅಂಗಡಿಗಳಿಂದ ಜನರ ಓಡಾಟಕ್ಕೆ ಕಿರಿಕಿರಿಯಾಗುವ ಅಂಗಡಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ  ಪುರಸಭೆ ಜಾಗದಲ್ಲಿ ಅನಧಿಕೃತವಾಗಿ ಇಟ್ಟಿರುವ ಅಂಗಡಿಗಳನ್ನು ತೆರವುಗೊಳಿಸಲಾಗುವುದೆಂದರು.

Author
ವಾಜಿದ್ ಖಾನ್
ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ತೀಕ್ಷ್ಣ ಬರವಣಿಗೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಇವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಮಾಡುವ ಮನವಿಯ ಮೌಲ್ಯ ವಿಭಾಗದ ಹೆಚ್ಆರ್ ಗುಂಡೂರಾವ್ ಸ್ಮಾರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾದ್ಯಂತ ಬ್ಯಾಂಕ್‌ಗೆ ಬೀಗಜಡಿಯುವ ಎಚ್ಚರಿಕೆ12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶಿವತಾರಕ್ ಆಯ್ಕೆದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!ಕಾವ್ಯ ಕಮ್ಮಟಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ; ಕವನ ರಚನೆಗೆ ಸಿಗಲಿದೆ ತರಬೇತಿಹುಳಿಯಾರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಶಿಕ್ಷಣಕ್ಕಾಗಿ ಜಮೀನು, ಬಿಸಿಯೂಟಕ್ಕೆ ನೀರು ದಾನ ಮಾಡಿದ್ದ ಮಹಾತಾಯಿ ʼಶ್ರೀದೇವಿʼ ಅಪಘಾತದಲ್ಲಿ ದುರ್ಮರಣಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆ; ತಾಜುದ್ದೀನ್ ಷರೀಫ್ ತೀವ್ರ ಖಂಡನೆರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯನರಿ ದಾಳಿ: ಮಹಿಳೆಯರು ಸೇರಿ ಮೂವರಿಗೆ ಗಾಯಬಸ್ ಪ್ರಯಾಣ ದರ ಏರಿಕೆ?: ನವಂಬರ್ 5ರಿಂದಲೇ ಜಾರಿ!