LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯ

ತುಮಕೂರು: ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿ ರಸ್ತೆ ಮುಚ್ಚುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಬೇಕು ಎಂದು ವಾರ್ಡ್‌-1ರ ವ್ಯಾಪ್ತಿಯ ಮರಳೇನಹಳ್ಳಿ, ಮರಳೇನಹಳ್ಳಿ ಗೋಮಾಳ, ಮರಿಯಪ್ಪನಪಾಳ್ಯ ಹಾಗೂ ಊರುಕೆರೆ ಮಜರೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದಿಂದ ಗೋಮಾಳಕ್ಕೆ ಹೋಗುವ ರಸ್ತೆ ಸರ್ವೆ ನಂ. 62/2 ರಲ್ಲಿ 1.16 ಗುಂಟೆ ಇದ್ದು, 5-08 ಗುಂಟೆ ಜಮೀನಿನಲ್ಲಿ ಗೋಮಾಳಕ್ಕೆ ಹೋಗುವ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆಯಲ್ಲಿ ಸುಮಾರು 70-80 ವರ್ಷಗಳಿಂದಲೂ ಸಾರ್ವಜನಿಕರು, ಮರಳೇನಹಳ್ಳಿ ಹಾಗೂ ಮರಳೇನಹಳ್ಳಿ ಗೋಮಾಳದಲ್ಲಿ ವಾಸವಾಗಿರುವ ಗ್ರಾಮಸ್ಥರು, ಊರುಕೆರೆ ಮಜರೆ, ಮರಿಯಪ್ಪನಪಾಳ್ಯದ ಗ್ರಾಮಸ್ಥರು ಪ್ರತಿನಿತ್ಯ ಓಡಾಡತ್ತಿದ್ದರು. ಈಗಲೂ ಸಹ ಇದೇ ರಸ್ತೆ ಈ ಭಾಗದ ಜನತೆಗೆ ಅನಿವಾರ್ಯವಾಗಿದೆ. ಬೇರೆ ಯಾವುದೇ ರಸ್ತೆ ಸಂಪರ್ಕ ಗೋಮಾಳಕ್ಕಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.

ಸ.ನಂ. 62/2ರ ಜಮೀನಿನ ಮಾಲೀಕರಾದ ಚಂದ್ರಯ್ಯ ಮತ್ತು ಅವರ ಪುತ್ರ ನವೀನ್ ಎಂಬುವರು ಕಳೆದ ಮೂರು ತಿಂಗಳ ಹಿಂದೆ ಈ ಜಮೀನನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ಬೇಲಿ ಹಾಕಿದ್ದಾರೆ ಎಂದು ದೂರಿದ್ದಾರೆ.

2015-16ರಲ್ಲಿ ಮರಳೇನಹಳ್ಳಿ ಗೋಮಾಳದಲ್ಲಿ ಮನೆ ಕಟ್ಟಿಕೊಂಡು ವಾಸವಿರುವವರಿಗೆ ಕಂದಾಯ ಇಲಾಖೆಯಿಂದ ನಿವೇಶನಗಳ ಹಕ್ಕಪತ್ರು ನೀಡಲಾಗಿದೆ. ಆ ಮನೆಗಳಿಗೂ ಸಹ ಯಾವುದೇ ರಸ್ತೆ ಸಂಪರ್ಕ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಸಹ ಜಮೀನಿನ ಮಾಲೀಕರು ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಈ ಬಗ್ಗೆ ಗಮನ ಹರಿಸಿ ರಸ್ತೆಗೆ ಅಡ್ಡಲಾಗಿ ಹಾಕಲಾಗಿರುವ ಕಾಂಪೌಂಡ್‌ನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದೇ ರಸ್ತೆ ಮಾರ್ಗವಾಗಿ ಸರ್ಕಾರದಿಂದ ವಿದ್ಯುತ್ ಸಂಪರ್ಕ ಅಳವಡಿಸಲಾಗಿದೆ. ಜತೆಗೆ ಹೇಮಾವತಿ ಕುಡಿಯುವ ನೀರಿನ ಸಂಪರ್ಕವೂ ಇದೇ ರಸ್ತೆ ಮಾರ್ಗವಾಗಿ ಹಾದು ಹೋಗಿದೆ. ಶಾಲೆಗಳಿಗೆ ಹೋಗಲು ಮಕ್ಕಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಅವಲಂಬಿಸಬೇಕಿದೆ. ರಸ್ತೆಗೆ ಅಡ್ಡ‌ಲಾಗಿ ತಂತಿ ಬೇಲಿ ಹಾಕಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಈ ರಸ್ತೆಗೆ ತಂತಿ ಬೇಲಿ ಹಾಕಿರುವುದರಿಂದ ಗೋಮಾಳದಲ್ಲಿರುವ ಸುಮಾರು 80 ಮನೆಗಳಿಗೆ ಹಾಗೂ ಜಮೀನಿಗೆ ಹೋಗಲು ಬೇರೆ ಯಾವುದೇ ರಸ್ತೆ ಇಲ್ಲದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

Author
ವಾಜಿದ್ ಖಾನ್
ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ತೀಕ್ಷ್ಣ ಬರವಣಿಗೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಇವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಮಾಡುವ ಮನವಿಯ ಮೌಲ್ಯ ವಿಭಾಗದ ಹೆಚ್ಆರ್ ಗುಂಡೂರಾವ್ ಸ್ಮಾರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾದ್ಯಂತ ಬ್ಯಾಂಕ್‌ಗೆ ಬೀಗಜಡಿಯುವ ಎಚ್ಚರಿಕೆ12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶಿವತಾರಕ್ ಆಯ್ಕೆದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!ಕಾವ್ಯ ಕಮ್ಮಟಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ; ಕವನ ರಚನೆಗೆ ಸಿಗಲಿದೆ ತರಬೇತಿಹುಳಿಯಾರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಶಿಕ್ಷಣಕ್ಕಾಗಿ ಜಮೀನು, ಬಿಸಿಯೂಟಕ್ಕೆ ನೀರು ದಾನ ಮಾಡಿದ್ದ ಮಹಾತಾಯಿ ʼಶ್ರೀದೇವಿʼ ಅಪಘಾತದಲ್ಲಿ ದುರ್ಮರಣಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆ; ತಾಜುದ್ದೀನ್ ಷರೀಫ್ ತೀವ್ರ ಖಂಡನೆರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯನರಿ ದಾಳಿ: ಮಹಿಳೆಯರು ಸೇರಿ ಮೂವರಿಗೆ ಗಾಯಬಸ್ ಪ್ರಯಾಣ ದರ ಏರಿಕೆ?: ನವಂಬರ್ 5ರಿಂದಲೇ ಜಾರಿ!