LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!

ಟಾಟಾ ಏಸ್ ವಾಹನದ ಟೈರ್ ಬರ್ಸ್ಟ್ ಆಗಿ ಅಪಘಾತ – ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ಶೋಕಸಾಗರ

ವರದಿ: ಸತ್ಯಲೋಕೇಶ್‌ ಪಾವಗಡ

ಪಾವಗಡ: ತಮ್ಮ ಇಷ್ಟದೈವ ಕದಿರಿ ಶ್ರೀ ನರಸಿಂಹ ಸ್ವಾಮಿ ದರ್ಶನ ಪಡೆದು ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಭಾನುವಾರ ಸಂಜೆ ಆಂಧ್ರಪ್ರದೇಶದ ಕದಿರಿ ಸಮೀಪ ನಡೆದಿದೆ.

ಪಾವಗಡ ತಾಲ್ಲೂಕಿನ ತಿಮ್ಮಮ್ಮನ‌ಹಳ್ಳಿ ಗ್ರಾಮದ ರಾಮಾಂಜನಪ್ಪ (55) ಹಾಗೂ ಅವರ ಪುತ್ರ ಚಿನ್ನಿ ಚರಣ್ (32) ಮೃತಪಟ್ಟ ದುರ್ದೈವಿಗಳು.

ಕುಟುಂಬದವರು ತಿಳಿಸಿರುವ ವಿವರಗಳ ಪ್ರಕಾರ, ಚಿನ್ನಿ ಚರಣ್ ಅವರ ಪುತ್ರನ ತಲೆಕೂದಲು ಸಮರ್ಪಿಸುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಟುಂಬದವರು ಶನಿವಾರ ರಾತ್ರಿ ಕದಿರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಭಾನುವಾರ ಸಂಜೆ ಟಾಟಾ ಏಸ್ ವಾಹನದಲ್ಲಿ ವಾಪಸ್ ಬರುತ್ತಿದ್ದಾಗ ಕದಿರಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿ ವಾಹನದ ಟೈರ್ ಏಕಾಏಕಿ ಬರ್ಸ್ಟ್ ಆಗಿದೆ.

ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಚಿನ್ನಿ ಚರಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರ ತಂದೆ ರಾಮಾಂಜನಪ್ಪ ಅವರನ್ನು ಚಿಕಿತ್ಸೆಗಾಗಿ ಅನಂತಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ತಂದೆ-ಮಗ ಇಬ್ಬರೂ ಒಂದೇ ದಿನ ದುರಂತ ಅಂತ್ಯ ಕಂಡಿರುವುದು ತಿಮ್ಮಮ್ಮನಪಳ್ಳಿ ಗ್ರಾಮಸ್ಥರನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಮೃತರ ಅಂತ್ಯಕ್ರಿಯೆಯನ್ನು ಸೋಮವಾರ ಸಂಜೆ ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಯಿತು.

Author
ವಾಜಿದ್ ಖಾನ್
ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ತೀಕ್ಷ್ಣ ಬರವಣಿಗೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಇವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಮಾಡುವ ಮನವಿಯ ಮೌಲ್ಯ ವಿಭಾಗದ ಹೆಚ್ಆರ್ ಗುಂಡೂರಾವ್ ಸ್ಮಾರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾದ್ಯಂತ ಬ್ಯಾಂಕ್‌ಗೆ ಬೀಗಜಡಿಯುವ ಎಚ್ಚರಿಕೆ12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶಿವತಾರಕ್ ಆಯ್ಕೆದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!ಕಾವ್ಯ ಕಮ್ಮಟಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ; ಕವನ ರಚನೆಗೆ ಸಿಗಲಿದೆ ತರಬೇತಿಹುಳಿಯಾರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಶಿಕ್ಷಣಕ್ಕಾಗಿ ಜಮೀನು, ಬಿಸಿಯೂಟಕ್ಕೆ ನೀರು ದಾನ ಮಾಡಿದ್ದ ಮಹಾತಾಯಿ ʼಶ್ರೀದೇವಿʼ ಅಪಘಾತದಲ್ಲಿ ದುರ್ಮರಣಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆ; ತಾಜುದ್ದೀನ್ ಷರೀಫ್ ತೀವ್ರ ಖಂಡನೆರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯನರಿ ದಾಳಿ: ಮಹಿಳೆಯರು ಸೇರಿ ಮೂವರಿಗೆ ಗಾಯಬಸ್ ಪ್ರಯಾಣ ದರ ಏರಿಕೆ?: ನವಂಬರ್ 5ರಿಂದಲೇ ಜಾರಿ!