ತುಮಕೂರು: ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಗುರುವಾರ ರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದ ವಿದ್ಯುತ್ ಅವಘಡ ಸಂಭವಿಸಿ ಮೊಬೈಲ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯೊಂದು ಹೊತ್ತಿ ಉರಿದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಹೊನ್ನುಡಿಕೆಯ ಮಂಜನಾಥ್ ಎಂಬುವರಿಗೆ ಸೇರಿದ ‘ಮಂಜು ಕಮ್ಯುನಿಕೇಷನ್’ ಮಳಿಗೆಯಲ್ಲಿ ೀ ಅವಘಡ ಸಂಭವಿಸಿದ್ದು, ಮಳಿಗೆಯಲ್ಲಿ ಮೊಬೈಲ್ ಫೋನ್ಗಳು, ಅಕ್ಸಸರೀಸ್ ಸೇರಿದಂತೆ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳಿದ್ದವು. ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಂಡುಬಂದು ಇಡೀ ಷೋರೂಮ್ಗೆ ತನ್ನ ಕೆನ್ನಾಲಿಗೆ ಚಾಚಿತು.
ಈ ಅವಘಡದಿಂದ ಮಳಿಗೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ಗಳು ಹಾಗೂ ಸಾಮಗ್ರಿಗಳು ಸುಟ್ಟುಹೋಗಿದ್ದು,. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಅಷ್ಟು ಹೊತ್ತಿಗೆ ಮಳಿಗೆಯಲ್ಲಿದ್ದ ವಸ್ತುಗಳು ಹಾಳಾಗಿಹೋಗಿದ್ದವು. ಆದರೂ, ಅಗ್ನಿ ಶಾಮಕ ದಳದವರ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿಸಿದಂತಾಗಿದೆ.
ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.