LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವು: ರಾಜಕುಮಾರ್ ಅಭಿನಂದನೆ

ಆಗ್ನೇಯ ಪದವೀಧರ ಕ್ಷೇತ್ರದ ಮತದಾರರಿಗೆ ಕೃತಜ್ಞತೆ

ವರದಿ ಚೇತನ್ ಜಿ ಜಾನಕಲ್

ಚಿಕ್ಕನಾಯಕನಹಳ್ಳಿ: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರು ಭರ್ಜರಿ ಗೆಲುವು ಸಾಧಿಸಿರುವುದಕ್ಕೆ ಜೆಡಿಎಸ್ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಜೆಡಿಎಸ್ ಮುಖಂಡ ಸಿಂಗದಹಳ್ಳಿಹಳ್ಳಿ ರಾಜಕುಮಾರ್ ಅವರು ಹರ್ಷ ವ್ಯಕ್ತಪಡಿಸಿ, ಬೆಂಬಲ ನೀಡಿದ ಎಲ್ಲಾ ಪದವೀಧರ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜೆಡಿಎಸ್–ಬಿಜೆಪಿ ಮೈತ್ರಿಕೂಟದ ನಾಯಕರ ಒಗ್ಗಟ್ಟಿನ ಶ್ರಮ ಹಾಗೂ ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಈ ಗೆಲುವು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜಕುಮಾರ್ ಅವರು, “ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರನ್ನು ಬೆಂಬಲಿಸಿ ಗೆಲುವಿಗೆ ಕಾರಣರಾದ ಎಲ್ಲಾ ಪದವೀಧರ ಮತದಾರರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪದವೀಧರ ಮತದಾರರು ಸೂಕ್ತ ಆಯ್ಕೆ ಮಾಡುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದು ಸಂತಸ ತಂದಿದೆ,” ಎಂದು ತಿಳಿಸಿದ್ದಾರೆ.

ಶಾಸಕ ಸಿ.ಬಿ. ಸುರೇಶ್ ಬಾಬು ಸೇರಿದಂತೆ ಮೈತ್ರಿಕೂಟದ ನಾಯಕರು ಹಾಗೂ ಕಾರ್ಯಕರ್ತರ ಪರಿಶ್ರಮವನ್ನು ಶ್ಲಾಘಿಸಿರುವ ಅವರು, ಕೆ.ಎಂ. ಸುರೇಶ್ ಅವರ ಗೆಲುವಿಗೆ ಸಹಕರಿಸಿದ ಎಲ್ಲಾ ಪದವೀಧರ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Author
ವಾಜಿದ್ ಖಾನ್
ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ತೀಕ್ಷ್ಣ ಬರವಣಿಗೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಇವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಮಾಡುವ ಮನವಿಯ ಮೌಲ್ಯ ವಿಭಾಗದ ಹೆಚ್ಆರ್ ಗುಂಡೂರಾವ್ ಸ್ಮಾರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾದ್ಯಂತ ಬ್ಯಾಂಕ್‌ಗೆ ಬೀಗಜಡಿಯುವ ಎಚ್ಚರಿಕೆ12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶಿವತಾರಕ್ ಆಯ್ಕೆದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!ಕಾವ್ಯ ಕಮ್ಮಟಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ; ಕವನ ರಚನೆಗೆ ಸಿಗಲಿದೆ ತರಬೇತಿಹುಳಿಯಾರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಶಿಕ್ಷಣಕ್ಕಾಗಿ ಜಮೀನು, ಬಿಸಿಯೂಟಕ್ಕೆ ನೀರು ದಾನ ಮಾಡಿದ್ದ ಮಹಾತಾಯಿ ʼಶ್ರೀದೇವಿʼ ಅಪಘಾತದಲ್ಲಿ ದುರ್ಮರಣಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆ; ತಾಜುದ್ದೀನ್ ಷರೀಫ್ ತೀವ್ರ ಖಂಡನೆರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯನರಿ ದಾಳಿ: ಮಹಿಳೆಯರು ಸೇರಿ ಮೂವರಿಗೆ ಗಾಯಬಸ್ ಪ್ರಯಾಣ ದರ ಏರಿಕೆ?: ನವಂಬರ್ 5ರಿಂದಲೇ ಜಾರಿ!