LIVE TV StateNationalEntertainmentSportsHealth
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೆಲಿಕಾಪ್ಟರ್ ದುರಂತದಲ್ಲಿ ತುಮಕೂರಿನ ಇಬ್ಬರ ದುರ್ಮರಣ!

ತುಮಕೂರು/ಡೆಹ್ರಾಡೂನ್: ಚಾರ್ ಧಾಮ್ ಭೇಟಿಗೆಂದು ತೆರಳಿದ್ದ ತುಮಕೂರು ಜಿಲ್ಲೆ ಹುಲಿಯೂರುದುರ್ಗದ ಇಬ್ಬರು ಜೋಶಿಮಠ ಬಳಿ ನಡೆದ ಹೆಲಿಕಾಪ್ಟರ್ ಪತನ ದುರಂತದಲ್ಲಿ ಅಸುನೀಗಿದ್ದಾರೆ.

ಯಾತ್ರಾಸ್ಥಳ ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಜೋಶಿಮಠ ಹತ್ತಿರ ತಲುಪುತ್ತಿದ್ದಂತೆ ಪತನಗೊಂಡಿದೆ. ರಾಜ್ಯದ ಒಟ್ಟು ಐವರು ಸೇರಿ ೬ ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕುಣಿಗಲ್ ತಾಲ್ಲೂಕಿನ ಹುಲಿಯೂದುರ್ಗದ ಹೆಚ್.ಎನ್.ನಟರಾಜ್ ಹಾಗೂ ಹಿರಿಯ ವಕೀಲರಾದ ಶಂಕರೇಗೌಡರು ದುರಂತ ಅಂತ್ಯಕಂಡಿದ್ದಾರೆ. ಐವರು ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.

news_1793366644_0_799.webp

ಈ ಹಿಂದೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಅರುಣ್ ಸೋಲಂಕಿ ಪರಿಚಯವಾಗಿದ್ದರು. ಶಂಕರ್ ಹಾಗೂ ನಟರಾಜ್ ಜೊತೆಗೆ ಚಾರ್ ಧಾಮ್ ಪ್ರವಾಸಕ್ಕೆ,  ಐವರು ಸ್ನೇಹಿತರು ತೆರಳಿದ್ದರು ಎನ್ನಲಾಗಿದೆ.

'ಹೆಲಿಕಾಪ್ಟರ್ ಅಪಘಾತ ನಿಜಕ್ಕೂ ದುರದೃಷ್ಟಕರ.  ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ನಾನು ಇಡೀ ಘಟನೆಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇನೆ ಎಂದುಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

Author
ವಾಜಿದ್ ಖಾನ್
ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ತೀಕ್ಷ್ಣ ಬರವಣಿಗೆ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗೆ ಇವರಿಗೆ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಜೊತೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಡಮಾಡುವ ಮನವಿಯ ಮೌಲ್ಯ ವಿಭಾಗದ ಹೆಚ್ಆರ್ ಗುಂಡೂರಾವ್ ಸ್ಮಾರಕ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾದ್ಯಂತ ಬ್ಯಾಂಕ್‌ಗೆ ಬೀಗಜಡಿಯುವ ಎಚ್ಚರಿಕೆ12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಶಿವತಾರಕ್ ಆಯ್ಕೆದೇವರ ದರ್ಶನಕ್ಕೆ ತೆರಳಿ ಮರಳುವಾಗ ದುರಂತ; ತಂದೆ-ಮಗ ಸಾವು!ಕಾವ್ಯ ಕಮ್ಮಟಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ; ಕವನ ರಚನೆಗೆ ಸಿಗಲಿದೆ ತರಬೇತಿಹುಳಿಯಾರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಶಿಕ್ಷಣಕ್ಕಾಗಿ ಜಮೀನು, ಬಿಸಿಯೂಟಕ್ಕೆ ನೀರು ದಾನ ಮಾಡಿದ್ದ ಮಹಾತಾಯಿ ʼಶ್ರೀದೇವಿʼ ಅಪಘಾತದಲ್ಲಿ ದುರ್ಮರಣಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಏರಿಕೆ; ತಾಜುದ್ದೀನ್ ಷರೀಫ್ ತೀವ್ರ ಖಂಡನೆರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ: ಕ್ರಮಕ್ಕೆ ಒತ್ತಾಯನರಿ ದಾಳಿ: ಮಹಿಳೆಯರು ಸೇರಿ ಮೂವರಿಗೆ ಗಾಯಬಸ್ ಪ್ರಯಾಣ ದರ ಏರಿಕೆ?: ನವಂಬರ್ 5ರಿಂದಲೇ ಜಾರಿ!